ಪ್ರಸೆಂಟರ್ ಕನ್ಸೋಲ್ ಎಕ್ಸ್‌ಟೆನ್ಶನ್  ನಿಮ್ಮ ಜಾರುಫಲಕ ಪ್ರದರ್ಶನದ ಸಮಯದಲ್ಲಿ ಮುಂಬರುವ ಜಾರುಫಲಕವನ್ನು, ಜಾರುಫಲಕದ ಟಿಪ್ಪಣಿಗಳನ್ನು  ನೋಡುವ, ಮತ್ತು ಪ್ರೇಕ್ಷಕರು ಕೇವಲ ಪ್ರಸ್ತುತ ಜಾರುಫಲಕವನ್ನು ಮಾತ್ರವೆ ನೋಡುವಂತಹ ಒಂದು ಪ್ರಸ್ತುತಿ ಟೈಮರಿನಂತಹ ಸಾಮರ್ಥ್ಯವನ್ನು ಒದಗಿಸುವ ಮೂಲಕ ಜಾರುಫಲಕದ ಪ್ರದರ್ಶನದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಲು ಅವಕಾಶವನ್ನು ಒದಗಿಸುತ್ತದೆ.
ದೊಡ್ಡ ಸಂಖ್ಯೆಯ ಪ್ರಸ್ತುತಿಯ ಅಂಶಗಳನ್ನು ತೋರಿಸಿ ಆ ಮೂಲಕ ಗೊಂದಲವುಂಟಾಗುವುದನ್ನು ತಪ್ಪಿಸಲು, ಪ್ರೆಸೆಂಟರ್ ಕನ್ಸೋಲ್ ಸುಲಭವಾಗಿ ಬದಲಾಯಿಸಬಹುದಾದ ಮೂರು ವಿವಿಧ ರೂಪದಲ್ಲಿ ಅಂಶಗಳನ್ನು ತೋರಿಸುತ್ತದೆ.
